Posts

ಕವನ ೩

ನವರಾತ್ರಿ ನವರಾತ್ರಿಯ ನವ ವಿಧ ಅವತಾರವೆತ್ತಿದ ಮಾತೆಗೆ ದಿನವೂ ಕುಂಕುಮದ ಅರ್ಚನೆ ಆ ನವ ದಿನವೂ ವಿವಿಧ ರೀತಿಯ ರಸದೂಟ ಎಲ್ಲರ ಮನೆಗಳಲಿ ಬೊಂಬೆಗಳ ಕೂಡಿಸುವಾಟ ಮುತ್ತೈದೆಯರ ಹಾಡು ಹಸೆಗಳ ಕೂಟ ನವ ದಿನಗಳಲಿ ರಕ್ಕಸರ ಸದೆಬಡಿದ ಆ ತಾಯಿಗೆ ದಶಮಿಯ ದಿನ ವಿಜಯಪತಾಕೆ ಹಾರಿಸಿದಾಕೆಗೆ ವೈಭವ ಉತ್ಸವದ ಮೆರವಣಿಗೆ ✍️ವಸುದಾ

ಕವನ ೨

ನವದುರ್ಗೆ ದೇವಿಯರು **ದೇವಿ ಶೈಲಪುತ್ರಿ** ನವರಾತ್ರಿಯ ಪ್ರಥಮ ದಿನದೆ ವಂದಿಪೆನು ನಿನಗೆ ತಾಯಿಯೆ ವೃಷಭಾರೂಡೆ ಚಂದ್ರಚೂಡೆಯೆ ಪದ್ಮಹಸ್ತೆಯೆ ತ್ರಿಶೂಲಪಾಣಿಯೆ ಹಿಮಗಿರಿತನಯೆ ಶೈಲಪುತ್ರಿಯೆ ಕಷ್ಟವ ನೀಗಿಸಿ ಕೊಡು ಮನೋಬಲವನೆ  ಎಂದು  ಬೇಡುವೆನು ನಿನ್ನಲ್ಲಿ ತಾಯೆ           ✍️ ವಸುದಾ                                                                       **ದೇವಿ ಬ್ರಹ್ಮಚಾರಿಣಿ** ಶಾಂತರೂಪಳೆ ಶಕ್ತಿದಾತಳೆ ಙ್ಞಾನ ವೈರಾಗ್ಯ ಸಿದ್ಧಳೆ ಜಪಮಾಲಾ ಕಮಂಡಲುಧಾರಳೆ ಶ್ವೇತವಸ್ತ್ರಧಾರಿಯೆ ಯುವತಿಯೆ ವಂದಿಪೆ ನಿನಗೆ ದ್ವಿತೀಯ ದಿನದೆ  ದುರ್ಗೆ ಶ್ರೀ ಬ್ರಹ್ಮಚಾರಿಣಿ ದೇವಿಯೇ                 ✍️ವಸುದಾ                                                                        18/10/2020 **ದೇವಿ ಚಂದ್ರಘಂಟಾ** ಅರ್ಧಚಂದ್ರಾಕಾರದಿ ಘಂಟೆಯ  ಹಣೆಯಲಿ ಧರಿಸಿದ ಸುಂದರ ರೂಪಳೆ ದುಷ್ಟರ ಶಿಕ್ಷಿಸಲು ಹಣೆಗಣ್ಣ ತೆರೆದಿರುವವಳೆ ಹತ್ತು ಕೈಗಳಲಿ ಶಸ್ತ್ರಗಳ ಧರಿಸಿದವಳೆ ರಕ್ತವರ್ಣದ ವಸ್ತ್ರವನ್ನುಟ್ಟು ಸಿಂಹವಾಹಿನಿಯಾಗಿ ಶಿಷ್ಟರ ರಕ್ಷಿಪ ಶ್ರೀ ಚಂದ್ರಘಂಟಾದೇವಿಯೆ ನಮಿಪೆನು ನಿನಗೆ ನವರಾತ್ರಿಯ ತೃತೀಯ ದಿನದೆ     ✍️ವಸುದಾ                                                                               19/10/2020 **ದೇವಿ ಶ್ರೀ ಕೂಷ್ಮಾಂಡ** ಜಗತ್ಸೃಷ್ಟಿಕರ್ತಳೆ ಸದಾ ಹಸನ್ಮುಖಳೆ  ಅಷ್ಟಸಿದ್ಧಿ ನವಸಿದ್ಧಿ

ಕವನ ೧

  **ಶ್ರೀ ಗಣೇಶಾಯ ನಮಃ** ** ಗಣಪ ** ಬಾರೋ ಗಣಪನೆ ಗೌರಿಯ ಪುತ್ರನೆ ಗಣನಾಯಕನೆ ಈಶಪುತ್ರನೆ ಬಾ ವಿದ್ಯಾಬುಧ್ಧಿಯ ಆರೋಗ್ಯಸಂಪದವ ಕೈಗಳ ಮುಗಿಯುತ ನಾ ಬೇಡುವೆ ಬಾ ಎಲ್ಲರ ಮನೆಯಲಿ ಪ್ರೀತಿ ಸಂಭ್ರಮದಿಂದಲಿ ಪೂಜೆಗೊಳ್ಳುವನೆ ನಿನಗೆ ದೀಪವನೆತ್ತುವೆ ಬಾ ಎಲ್ಲರ ಮನಸಿನ ಕಲ್ಮಶಗಳನು ತೊಡೆಯುವ ಪಾಶಾಂಕುಶಧರನೆ ನಿನಗೆ ಧೂಪವ ತೋರುವೆ ಬಾ ಎಳ್ಳುಂಡೆ ಕಡಬು ಕಜ್ಜಾಯ ಚಕ್ಕುಲಿ ಹಲವಿಧ ಫಲಗಳ ನಿನಗೆ ನೀಡುವೆ ಬಾ ಎಲ್ಲರಿಗೂ ಆರೋಗ್ಯ ಸಂಪತ್ತು ಕೊಡೆಂದು ಬೇಡುತ ನೈವೇದ್ಯವನು ನಿನಗೆ ಕೊಡುವೆನು ಬಾ ತಾಯಿಯ ಜೊತೆಯಲಿ ಮುದ್ದಾಗಿ ಬಂದು ಕೂತ ಲಂಬೋದರನೆ ನಿನಗೆ ಆರತಿಯನ್ನೆತ್ತುವೆ ಬಾ ಮತ್ತೆ ಮತ್ತೆ ನಿನಗೆ ನಾ ವಂದಿಸಿ ಬೇಡುವೆ ವಿಘ್ನಗಳೆಲ್ಲವ ಪರಿಹರಿಸೆನ್ನುತ ವಿಘ್ನ ನಿವಾರಕನೆ ಬಾ ✍️ವಸುದಾ