Posts

Showing posts from January, 2021

ಕವನ ೩

ನವರಾತ್ರಿ ನವರಾತ್ರಿಯ ನವ ವಿಧ ಅವತಾರವೆತ್ತಿದ ಮಾತೆಗೆ ದಿನವೂ ಕುಂಕುಮದ ಅರ್ಚನೆ ಆ ನವ ದಿನವೂ ವಿವಿಧ ರೀತಿಯ ರಸದೂಟ ಎಲ್ಲರ ಮನೆಗಳಲಿ ಬೊಂಬೆಗಳ ಕೂಡಿಸುವಾಟ ಮುತ್ತೈದೆಯರ ಹಾಡು ಹಸೆಗಳ ಕೂಟ ನವ ದಿನಗಳಲಿ ರಕ್ಕಸರ ಸದೆಬಡಿದ ಆ ತಾಯಿಗೆ ದಶಮಿಯ ದಿನ ವಿಜಯಪತಾಕೆ ಹಾರಿಸಿದಾಕೆಗೆ ವೈಭವ ಉತ್ಸವದ ಮೆರವಣಿಗೆ ✍️ವಸುದಾ

ಕವನ ೨

ನವದುರ್ಗೆ ದೇವಿಯರು **ದೇವಿ ಶೈಲಪುತ್ರಿ** ನವರಾತ್ರಿಯ ಪ್ರಥಮ ದಿನದೆ ವಂದಿಪೆನು ನಿನಗೆ ತಾಯಿಯೆ ವೃಷಭಾರೂಡೆ ಚಂದ್ರಚೂಡೆಯೆ ಪದ್ಮಹಸ್ತೆಯೆ ತ್ರಿಶೂಲಪಾಣಿಯೆ ಹಿಮಗಿರಿತನಯೆ ಶೈಲಪುತ್ರಿಯೆ ಕಷ್ಟವ ನೀಗಿಸಿ ಕೊಡು ಮನೋಬಲವನೆ  ಎಂದು  ಬೇಡುವೆನು ನಿನ್ನಲ್ಲಿ ತಾಯೆ           ✍️ ವಸುದಾ                                                                       **ದೇವಿ ಬ್ರಹ್ಮಚಾರಿಣಿ** ಶಾಂತರೂಪಳೆ ಶಕ್ತಿದಾತಳೆ ಙ್ಞಾನ ವೈರಾಗ್ಯ ಸಿದ್ಧಳೆ ಜಪಮಾಲಾ ಕಮಂಡಲುಧಾರಳೆ ಶ್ವೇತವಸ್ತ್ರಧಾರಿಯೆ ಯುವತಿಯೆ ವಂದಿಪೆ ನಿನಗೆ ದ್ವಿತೀಯ ದಿನದೆ  ದುರ್ಗೆ ಶ್ರೀ ಬ್ರಹ್ಮಚಾರಿಣಿ ದೇವಿಯೇ                 ✍️ವಸುದಾ                                                                        18/10/2020 **ದೇವಿ ಚಂದ್ರಘಂಟಾ** ಅರ್ಧಚಂದ್ರಾಕಾರದಿ ಘಂಟೆಯ  ಹಣೆಯಲಿ ಧರಿಸಿದ ಸುಂದರ ರೂಪಳೆ ದುಷ್ಟರ ಶಿಕ್ಷಿಸಲು ಹಣೆಗಣ್ಣ ತೆರೆದಿರುವವಳೆ ಹತ್ತು ಕೈಗಳಲಿ ಶಸ್ತ್ರಗಳ ಧರಿಸಿದವಳೆ ರಕ್ತವರ್ಣದ ವಸ್ತ್ರವನ್ನುಟ್ಟು ಸಿಂಹವಾಹಿನಿಯಾಗಿ ಶಿಷ್ಟರ ರಕ್ಷಿಪ ಶ್ರೀ ಚಂದ್ರಘಂಟಾದೇವಿಯೆ ನಮಿಪೆನು ನಿನಗೆ ನವರಾತ್ರಿಯ ತೃತೀಯ ದಿನದೆ     ✍️ವಸುದಾ                                                                               19/10/2020 **ದೇವಿ ಶ್ರೀ ಕೂಷ್ಮಾಂಡ** ಜಗತ್ಸೃಷ್ಟಿಕರ್ತಳೆ ಸದಾ ಹಸನ್ಮುಖಳೆ  ಅಷ್ಟಸಿದ್ಧಿ ನವಸಿದ್ಧಿ