ಕವನ ೩

ನವರಾತ್ರಿ



ನವರಾತ್ರಿಯ ನವ ವಿಧ ಅವತಾರವೆತ್ತಿದ

ಮಾತೆಗೆ ದಿನವೂ ಕುಂಕುಮದ ಅರ್ಚನೆ

ಆ ನವ ದಿನವೂ ವಿವಿಧ ರೀತಿಯ ರಸದೂಟ

ಎಲ್ಲರ ಮನೆಗಳಲಿ ಬೊಂಬೆಗಳ ಕೂಡಿಸುವಾಟ

ಮುತ್ತೈದೆಯರ ಹಾಡು ಹಸೆಗಳ ಕೂಟ

ನವ ದಿನಗಳಲಿ ರಕ್ಕಸರ ಸದೆಬಡಿದ ಆ ತಾಯಿಗೆ

ದಶಮಿಯ ದಿನ ವಿಜಯಪತಾಕೆ ಹಾರಿಸಿದಾಕೆಗೆ

ವೈಭವ ಉತ್ಸವದ ಮೆರವಣಿಗೆ

✍️ವಸುದಾ







Comments